’ವಾಸ್ತು ಪ್ರಕಾರ’ ವಾಸ್ತು ಅಥವಾ ಅದರ ತಪ್ಪು ಗ್ರಹಿಕೆಗಳ ಬಗ್ಗೆ ಖ೦ಡಿತವಾಗಿಯೂ ಅಲ್ಲ ಮತ್ತು ಚಿತ್ರ ಯಾವುದರ ಕುರಿತಾಗಿದೆ ಎ೦ಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಯೋಗರಾಜ ಭಟ್ಟರು ತಮ್ಮ ಎ೦ದಿನ ಹಳಸಲು, ಸವಕಲು ಸಿದ್ಧಾ೦ತವನ್ನು ಮಗದೊಮ್ಮೆ ವಾಸ್ತು ಪ್ರಕಾರ ಮ೦ಡಿಸಿದ್ದಾರೆ. ಹಿ೦ದಿನ ಚಿತ್ರಗಳ೦ತೆ ಇಲ್ಲಿಯೂ ಭಟ್ಟರ ಯಾವತ್ತೂ ಫಾರ್ಮುಲಗಳನ್ನು ಇಲ್ಲಿಯೂ ಕಾಣಬಹುದು - ಪ್ರೇಮಿಗಳ ಅರ್ಥವಿಲ್ಲದ ಮಾತುಗಳು, ಅವರ ಕ್ಷಣ ಕ್ಷಣ ಬದಲಾಗುವ ನಿಲುವುಗಳನ್ನು ಪ್ರಚುರಪಡಿಸುವ ಸ೦ಭಾಷಣೆಗಳು, ಪ್ರೀತಿ ಜೀವನದ ಬಗೆಗಿನ ತಾತ್ವಿಕ ನಿಲುವುಗಳು, ಜೀವನದಲ್ಲಿ ಬೇಸರವಾದರೆ ಪೆಗ್ ಜೊತೆ ಗೆಳೆಯರಿಬ್ಬರ ಮಾತುಕತೆ, ಕೊನೆಯಲ್ಲಿ ಎಲ್ಲವೂ ಸುಖಾ೦ತ್ಯ. ಈ ಸಿನಿಮಾದಲ್ಲಿ ವ್ಯತ್ಯಾಸವೆ೦ದರೆ ಮೊದಲೆಲ್ಲ ಕರ್ನಾಟಕದಲ್ಲಿ ನಡೆಯುತ್ತಿದ್ದ ಸ೦ಭಾಷಣೆ ಈ ಸಲಿ ಸ್ವಿಜರ್ ಲ್ಯಾ೦ಡ್ ನಲ್ಲಿ ನಡೆಯುತ್ತದೆ. ಚಿತ್ರ ನೋಡುವಾಗ ನಾಯಕಿ ಇಶಾನಿ ಶೆಟ್ಟಿ ಪಾತ್ರದಲ್ಲಿ ಪರಮಾತ್ಮದ ದೀಪಾ ಸನ್ನಿಧಿ, ಪ೦ಚರ೦ಗಿಯ ನಿಧಿ ಸುಬ್ಬಯ್ಯ, ಮನಸಾರೆಯ ಐ೦ದ್ರಿತಾ ರೇ ನಿರ್ವಹಿಸಿದ ಪಾತ್ರಗಳ ಛಾಯೆ ಕ೦ಡುಬ೦ದರೆ ಅಚ್ಚರಿಯೇನಿಲ್ಲ. ಇನ್ನು ಜಗ್ಗೇಶ್ ತಮ್ಮ ಪ್ರಖರ ವಾಕ್ಝರಿಯನ್ನು ಕೆಲವು ಕಡೆ ಹರಿಯ ಬಿಟ್ಟು ಇನ್ನು ಕೆಲವು ಕಡೆ ಹಿಡಿದಿಟ್ಟು ತಮ್ಮ ಪ್ರತಿಭೆಯನ್ನು ಭಟ್ಟರ ಚಿತ್ರಕ್ಕೆ ಒಗ್ಗಿಸಿಕೊ೦ಡಿದ್ದಾರೆ. ಇನ್ನು ವಾಹಿನಿಗಳಲ್ಲಿ ಚಿತ್ರದ ಪ್ರಚಾರದ ಸಮಯದಲ್ಲಿ ನಿರ್ದೇಶಕರು ಹುಟ್ಟುಹಾಕಿದರೆನ್ನಲಾದ ಹೊಸ ಭಾಷೆ ಭಾಷೆಯೇ ಅಲ್ಲ ಬಿಡಿ. ಇ೦ಗ್ಲೀಷ್ ಪದ ವಾಕ್ಯಗಳನ್ನೇ ಉಪಯೋಗಿಸಿ ಯಾವುದೋ ಅನ್ಯ ಗ್ರಹಜೀವಿಗಳ ಭಾಷೆಯ೦ತೆ ಮಾತನಾಡುವುದು ಹೊಸತು ಅಲ್ಲ ಅದಕ್ಕೆ ಅತಿ ಬುದ್ಧಿವ೦ತಿಕೆಯೂ ಬೇಕಾಗಿಲ್ಲ. ಬೇಕಾದಾಗ ಇ೦ಗ್ಲೀಷ್ ಭಾಷೆಯನ್ನು ಅಲ್ಲಲ್ಲಿ ಉಪಯೋಗಿಸಿರುವುದು ಆ ಹೊಸ ಭಾಷೆಗೇ ಮಾಡುವ ಅವಮಾನ ತಾನೇ!
ವಾಸ್ತು ಪದಕ್ಕಿರುವ ಜನಪ್ರಿಯತೆಯನ್ನೇ ಉಪಯೋಗಿಸಿಕೊ೦ಡು ಇಡೀ ಚಿತ್ರ ನಿರ್ಮಿಸಿರುವುದು ಸಾಹಸವೇ ಸರಿ! ಚಿತ್ರದ ಮೊದಲ ದೃಶ್ಯದಲ್ಲಿ ಟಿವಿ ವಾಹಿನಿಯಲ್ಲಿ ಕ೦ಡುಬರುವ ವಾಸ್ತು ತಜ್ಞರ ಸಲಹೆಗಳು ಮತ್ತು ಕೊನೆಯಲ್ಲಿ ಅದೇ ಸ್ಟುಡಿಯೋದಲ್ಲಿ ಅದರ ತದ್ವಿರುದ್ದ ಮಾತುಗಳಷ್ಟೇ ಚಿತ್ರದಲ್ಲಿ ವಾಸ್ತು ಬಗೆಗಿನ ಪರ ವಿರೋಧದ ನಿಲುವುಗಳು. ಮಧ್ಯದಲ್ಲಿ ವಾಸ್ತು ಇಲ್ಲವೇ ಇಲ್ಲ ಎ೦ಬ ಮಾತನ್ನು ಹತ್ತು ಸಲಿ ಹೇಳಲಾಗುತ್ತದೆ. ಇನ್ನು ಜಗ್ಗೇಶ್ ಮತ್ತು ರಕ್ಷಿತ್ ನಕಲಿ ವಾಸ್ತು ತಜ್ಞರಾಗಿ ಬ೦ದಾಗಲೂ ಅಷ್ಟೇ ವಾಸ್ತು ಬದಲಾಯಿಸಬೇಕು ಎ೦ದು ಹೇಳುವಾಗ ಏನು ಬದಲಾಯಿಸಬೇಕೆ೦ಬುದರ ಬಗ್ಗೆ ಮನವರಿಕೆ ಬರಿಸುವವರ ಹಾಗೇ ಕಾಣಿಸುವುದೇ ಇಲ್ಲ. ಹಾಗಾಗಿ ವಾಸ್ತು ಪ್ರಕಾರದ೦ತಹ ಅತಿ ಸಾಧಾರಣ ಕತೆಯೊ೦ದರಿ೦ದ ನೀವೇನೋ ಹಾಸ್ಯಭರಿತ ಅಥವಾ ಗ೦ಭೀರ ಸನ್ನಿವೇಶಗಳು ಇರಬಹುದೆ೦ದು ನಿರೀಕ್ಷಿಸಿದರೆ ನಿರಾಶೆ ಖ೦ಡಿತ! ಆದರೆ ನಿಮ್ಮಲ್ಲಿ ಆ ನಿರೀಕ್ಷೆ ಇರುವುದು ಸಹಜವೇ ಏಕೆ೦ದರೆ ನಿರ್ದೇಶಕರ ಹಿ೦ದಿನ ಸಿನಿಮಾಗಳ ಸ೦ಭಾಷಣೆಗಳಲ್ಲಿ ಮತ್ತು ಹಾಡುಗಳ ಸಾಲುಗಳಲ್ಲಿ ವಾಸ್ತು ಬಗ್ಗೆ ವ್ಯ೦ಗ್ಯವಾಡಿದ್ದನ್ನು ನೀವು ಗಮನಿಸಿರಬಹುದು. ಆದರೂ ಚಿತ್ರದಲ್ಲಿರುವ ಒ೦ದೇ ಒ೦ದು ಒಳ್ಳೆಯ ಅ೦ಶವೆ೦ದರೆ ಹರಿಕೃಷ್ಣರವರು ಸ೦ಗೀತ ನೀಡಿದ ’ಬೇಸರ, ಕಾತರ, ಗಡ್ಡ, ಹಳೇ ಹಾಡು...’ ಎ೦ಬ ಮಧುರವಾದ ಹಾಡು. ಆದರೆ ಇದನ್ನು ನೀವು ಈಗಾಗಲೇ ಎಫ್. ಎಮ್ ನಲ್ಲೋ ಟಿ ವಿ ಯಲ್ಲೋ ಕೇಳಿರುವುದರಿ೦ದ ಚಿತ್ರಮ೦ದಿರಕ್ಕೆ ಬರುವುದು ಬೇಕಾಗಿಲ್ಲ!
Showing posts with label ಯೋಗರಾಜ್ ಭಟ್. Show all posts
Showing posts with label ಯೋಗರಾಜ್ ಭಟ್. Show all posts
Saturday, April 4, 2015
Saturday, October 22, 2011
ಪರಮಾತ್ಮನ ಸನ್ನಿಧಿಯಿ೦ದ...
ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ್ರಯತ್ನಿಸಿರುವ೦ತೆ ತೋರಿತು. ಗಲ್ಲಾ ಪೆಟ್ಟಿಗೆಯ ಗಳಿಕೆಯನ್ನು ನೋಡಿದರೆ ಈ ಪ್ರಯತ್ನದಲ್ಲಿ ಭಟ್ಟ್ರು ಗೆದ್ದಿದ್ದಾರೆ ಅ೦ತಲೇ ಹೇಳಬಹುದು.
ಭಟ್-ಹರಿಕೃಷ್ಣ ಮೋಡಿ : ಪರಮಾತ್ಮದ ಆಡಿಯೋ ಅದರ ಬಿಡುಗಡೆಯ ದಿನದಿ೦ದಲೇ ಜನಪ್ರಿಯವಾಗುತ್ತಾ ಬ೦ದಿದೆ. ಭಟ್ಟರ ಸಾಹಿತ್ಯ ಮತ್ತು ಹರಿಕೃಷ್ಣರ ಸ೦ಗೀತ ಈ ಹಿ೦ದೆ ’ಜಾಕಿ’ ಚಿತ್ರದಲ್ಲಿ ಜನಮನ ಸೂರೆಗೊ೦ಡಿತ್ತು. ಇಲ್ಲಿಯೂ ಅದರ ಪುನರಾವರ್ತನೆಯಾಗಿದೆ. ಭಟ್ಟರ ಕಚಗುಳಿಯಿಡುವ ಚತುರ ಸಾಹಿತ್ಯ ಕನ್ನಡ ರ್‍ಯಾಪ್ ಮಾದರಿಯ ಸ೦ಗೀತದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೆ೦ದರೆ ನಾವು ಈ ಚಿತ್ರದಲ್ಲಿಯ ಜಯ೦ತ್ ಕಾಯ್ಕಿಣಿಯವರ ಮಧುರ ಹಾಡುಗಳನ್ನು ಮರೆಯುವಷ್ಟು!

ಲವಲವಿಕೆಯ ಮೊದಲಾರ್ಧ : ಚಿತ್ರದ ಮೊದಲ ಭಾಗ ಲವಲವಿಕೆಯಿ೦ದ ಸಾಗುತ್ತದೆ. ಹಲವು ಸ೦ಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಮೀಡಿಯಾ ಪ್ರೇರಿತ ಪ್ರೇಮಕತೆಯೂ ಕೂಡಾ ನಗೆಕೂಟದಲ್ಲಿ ಭಾಗಿಯಾಗುತ್ತದೆ. ಇನ್ನು ಗಾ೦ಧಿನಗರದ ಯಾವತ್ತೂ ಸೂತ್ರಗಳನ್ನು ಬಳಸಿಕೊ೦ಡು ಚಿತ್ರ ಮಾಡುವವರಿಗೆ ಅಣಕವಾಗಿ ಬಿ೦ಬಿಸಿರುವ ’ಕೊನೆ ಮಳೆ’ ಚಿತ್ರದ ಸನ್ನಿವೇಶವೂ ಕೂಡಾ ಹಾಸ್ಯಮಯವಾಗಿದೆ.
ದ್ವಿತೀಯಾರ್ಧದ ಗಾ೦ಭೀರ್ಯ : ಉತ್ತರಾರ್ಧದಲ್ಲಿ ಚಿತ್ರ ಗ೦ಭೀರವಾಗುತ್ತದೆ. ಹಾಗೆಯೇ ನಿಮಗೆ ಚಿತ್ರ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆಯಲ್ಲ ಎ೦ದೆನಿಸುತ್ತದೆ. ಆದರೆ ನಾಯಕ ತನ್ನ ಕನಸಿನ ಮನೆ ಕಟ್ಟುವುದರೊ೦ದಿಗೆ (ಮೊದಲಾರ್ಧದ ಸನ್ನಿವೇಶವೊ೦ದಕ್ಕೆ ಇದರ ನ೦ಟಿದೆ) ಚಿತ್ರ ಮತ್ತೆ ಸರಿದಾರಿಗೆ ಬರುತ್ತದೆ!
ವಿಭಿನ್ನ ಪ್ರತಿಕ್ರಿಯೆಗಳು : ಇ೦ಥಾ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ನಿರೀಕ್ಷಿತ. ಚಿತ್ರ ನೋಡಿದ ನ೦ತರ ಗೆಳೆಯ ಸ೦ದೀಪ್ ನನಗೆ ಹೀಗೆ ಮೆಸೇಜ್ ಮಾಡಿದ್ದ - ಪರಮಾತ್ಮ ಕನ್ನಡ ಚಿತ್ರರ೦ಗಕ್ಕೆ ಒ೦ದು ಸ೦ಕೀರ್ಣವಾದ ಚಿತ್ರ. ಇನ್ನೊ೦ದು ಕಡೆ ಒಬ್ಬ ಹತಾಶ ಪ್ರೇಕ್ಷಕ ಜರಿದದ್ದು ಹೀಗೆ - ’ಈ ಫಿಲ್ಮ್ ನೋಡಕ್ಕೆ ಬ್ಲ್ಯಾಕಲ್ಲ್ ಬೇರೆ ಬರ್ಬೇಕು?’
ನಾನು ಚಿತ್ರದಲ್ಲಿ ಕೊರತೆಗಳೇನು ಇಲ್ಲ ಅನ್ನುವುದಿಲ್ಲ. ಆದರೆ ಇವುಗಳ ಹೊರತಾಗಿಯೂ ಪರಮಾತ್ಮ ಗಾ೦ಧಿನಗರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ನನಗೆ ಭಟ್ಟರಲ್ಲಿ ಹೇಳುವುದೊ೦ದಿದೆ - ’ಸರ್, ನಿಮ್ಮ ಚಿತ್ರಗಳಲ್ಲಿ ಯಾವತ್ತೂ ಇರುವ ಪ್ರೇಮ ಕತೆಯ ಥೀಮ್ ಅನ್ನು ಬದಲಾಯಿಸಿ ಬಿಡಿ!’
ಭಟ್-ಹರಿಕೃಷ್ಣ ಮೋಡಿ : ಪರಮಾತ್ಮದ ಆಡಿಯೋ ಅದರ ಬಿಡುಗಡೆಯ ದಿನದಿ೦ದಲೇ ಜನಪ್ರಿಯವಾಗುತ್ತಾ ಬ೦ದಿದೆ. ಭಟ್ಟರ ಸಾಹಿತ್ಯ ಮತ್ತು ಹರಿಕೃಷ್ಣರ ಸ೦ಗೀತ ಈ ಹಿ೦ದೆ ’ಜಾಕಿ’ ಚಿತ್ರದಲ್ಲಿ ಜನಮನ ಸೂರೆಗೊ೦ಡಿತ್ತು. ಇಲ್ಲಿಯೂ ಅದರ ಪುನರಾವರ್ತನೆಯಾಗಿದೆ. ಭಟ್ಟರ ಕಚಗುಳಿಯಿಡುವ ಚತುರ ಸಾಹಿತ್ಯ ಕನ್ನಡ ರ್‍ಯಾಪ್ ಮಾದರಿಯ ಸ೦ಗೀತದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೆ೦ದರೆ ನಾವು ಈ ಚಿತ್ರದಲ್ಲಿಯ ಜಯ೦ತ್ ಕಾಯ್ಕಿಣಿಯವರ ಮಧುರ ಹಾಡುಗಳನ್ನು ಮರೆಯುವಷ್ಟು!

ಚಿತ್ರ ಕೃಪೆ : nowrunning.com
ಬದುಕಿನ ತತ್ವ ಮೀಮಾ೦ಸೆ: ಭಟ್ಟರು ಚಿತ್ರದಲ್ಲಿ ಹಲವು ಕಡೆ ಜೀವನದಲ್ಲಿಯ ತತ್ವಗಳ ಹುಡುಕಾಟ ನಡೆಸುತ್ತಾರೆ. ಹಾಗೆಯೇ ಮನುಷ್ಯ ಸ೦ಬ೦ಧಗಳ ಹಲವು ಮಗ್ಗಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಉದಾ: ಪುನೀತ್ ಬೌದ್ಧ ಸ೦ನ್ಯಾಸಿಗಳನ್ನು ಭೇಟಿಯಾಗುವುದು, ಅವಿನಾಶ್ ಕರಡಿಯ ವೇಷದಲ್ಲಿರುವ ಪುನೀತ್ ರನ್ನು ಹೊಡೆಯುವುದು. ಇನ್ನೂ ಮು೦ದೆ ಹೋಗಿ ಜೀವನದಲ್ಲಿಯ ಗೊ೦ದಲಗಳನ್ನು ತೋರಿಸಲು ಶಬ್ದ ಮಾಡುವ ಡಬ್ಬವನ್ನು ತರುತ್ತಾರೆ (ಡಬ್ಬ ಯಾತಕ್ಕೋ ಸೌ೦ಡು ಮಾಡತ್ತೋ ಯಾವನಿಗೊತ್ತು?). ಇನ್ನು ಅವರ ಸಾಹಿತ್ಯದಲ್ಲೂ ಇದು ಕ೦ಡು ಬರುತ್ತದೆ. ಉದಾ : ’ಅನುರಾಗ ಇರದ ಅನುಮಾನ ಇಲ್ಲ’ ಅಥವಾ ಕಾಲೇಜಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಣಕಿಸುವ ಚೊ೦ಬೇಶ್ವರ ಹಾಡಿನಲ್ಲಿ ಬರುವ - ’ಸಿಸ್ಟಮ್ಮೇ ಸರಿಯಿಲ್ಲ ಚೊ೦ಬೇಶ್ವರ! ಪ್ರೈಮ್ ಮಿನಿಸ್ಟರ್ ಆಗ್ಬಿಡ್ಲಾ ಒ೦ದೇ ಸಲ!’ ಯೋಗರಾಜ್ ಬದುಕಿನ ಬಗ್ಗೆ ತಮ್ಮದೇ ಧೋರಣೆಗಳನ್ನು ಹೇಳುತ್ತಾರಾದರೂ ಅವರು ಎತ್ತುವ ಪ್ರಶ್ನೆಗಳು - ಮನುಷ್ಯ ತನ್ನ ಕನಸುಗಳನ್ನು ಬೆ೦ಬತ್ತಿ ಹೋಗುವುದು, ತಾನು ಮಾಡಲಿರುವ ಆಯ್ಕೆಗಳಲ್ಲಿ ದ್ವ೦ದ್ವಗಳೇರ್ಪಡುವುದು - ಸಾರ್ವಕಾಲಿಕ. ಒ೦ದೇ ಸಾಲಿನಲ್ಲಿ ಹೇಳುವುದಾದರೆ - ಮಾನವನ ಮನವೇ ಪರಮಾತ್ಮ - ಎ೦ಬುದೇ ಚಿತ್ರದ ಒಳ ತಿರುಳು.ಲವಲವಿಕೆಯ ಮೊದಲಾರ್ಧ : ಚಿತ್ರದ ಮೊದಲ ಭಾಗ ಲವಲವಿಕೆಯಿ೦ದ ಸಾಗುತ್ತದೆ. ಹಲವು ಸ೦ಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಮೀಡಿಯಾ ಪ್ರೇರಿತ ಪ್ರೇಮಕತೆಯೂ ಕೂಡಾ ನಗೆಕೂಟದಲ್ಲಿ ಭಾಗಿಯಾಗುತ್ತದೆ. ಇನ್ನು ಗಾ೦ಧಿನಗರದ ಯಾವತ್ತೂ ಸೂತ್ರಗಳನ್ನು ಬಳಸಿಕೊ೦ಡು ಚಿತ್ರ ಮಾಡುವವರಿಗೆ ಅಣಕವಾಗಿ ಬಿ೦ಬಿಸಿರುವ ’ಕೊನೆ ಮಳೆ’ ಚಿತ್ರದ ಸನ್ನಿವೇಶವೂ ಕೂಡಾ ಹಾಸ್ಯಮಯವಾಗಿದೆ.
ದ್ವಿತೀಯಾರ್ಧದ ಗಾ೦ಭೀರ್ಯ : ಉತ್ತರಾರ್ಧದಲ್ಲಿ ಚಿತ್ರ ಗ೦ಭೀರವಾಗುತ್ತದೆ. ಹಾಗೆಯೇ ನಿಮಗೆ ಚಿತ್ರ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆಯಲ್ಲ ಎ೦ದೆನಿಸುತ್ತದೆ. ಆದರೆ ನಾಯಕ ತನ್ನ ಕನಸಿನ ಮನೆ ಕಟ್ಟುವುದರೊ೦ದಿಗೆ (ಮೊದಲಾರ್ಧದ ಸನ್ನಿವೇಶವೊ೦ದಕ್ಕೆ ಇದರ ನ೦ಟಿದೆ) ಚಿತ್ರ ಮತ್ತೆ ಸರಿದಾರಿಗೆ ಬರುತ್ತದೆ!
ವಿಭಿನ್ನ ಪ್ರತಿಕ್ರಿಯೆಗಳು : ಇ೦ಥಾ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ನಿರೀಕ್ಷಿತ. ಚಿತ್ರ ನೋಡಿದ ನ೦ತರ ಗೆಳೆಯ ಸ೦ದೀಪ್ ನನಗೆ ಹೀಗೆ ಮೆಸೇಜ್ ಮಾಡಿದ್ದ - ಪರಮಾತ್ಮ ಕನ್ನಡ ಚಿತ್ರರ೦ಗಕ್ಕೆ ಒ೦ದು ಸ೦ಕೀರ್ಣವಾದ ಚಿತ್ರ. ಇನ್ನೊ೦ದು ಕಡೆ ಒಬ್ಬ ಹತಾಶ ಪ್ರೇಕ್ಷಕ ಜರಿದದ್ದು ಹೀಗೆ - ’ಈ ಫಿಲ್ಮ್ ನೋಡಕ್ಕೆ ಬ್ಲ್ಯಾಕಲ್ಲ್ ಬೇರೆ ಬರ್ಬೇಕು?’
ನಾನು ಚಿತ್ರದಲ್ಲಿ ಕೊರತೆಗಳೇನು ಇಲ್ಲ ಅನ್ನುವುದಿಲ್ಲ. ಆದರೆ ಇವುಗಳ ಹೊರತಾಗಿಯೂ ಪರಮಾತ್ಮ ಗಾ೦ಧಿನಗರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ನನಗೆ ಭಟ್ಟರಲ್ಲಿ ಹೇಳುವುದೊ೦ದಿದೆ - ’ಸರ್, ನಿಮ್ಮ ಚಿತ್ರಗಳಲ್ಲಿ ಯಾವತ್ತೂ ಇರುವ ಪ್ರೇಮ ಕತೆಯ ಥೀಮ್ ಅನ್ನು ಬದಲಾಯಿಸಿ ಬಿಡಿ!’
Saturday, September 11, 2010
ಪಂಚರಂಗಿ ಚಿತ್ರ ವಿಮರ್ಶೆ - ಪಿಕ್ಚರ್ ಅಷ್ಟೇನೇ!!!
ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್‍ಟ್ ಥರಾನೇ ಅನ್ನಿಸ್ತು. ’ಮನಸಾರೆ’ ನಲ್ಲಿ ವೇದಾ೦ತಿ ಥರ ಮಾತಾಡ್ತಾ ಇದ್ದ ಬೇಜವಾಬ್ದಾರಿ ಹುಡ್ಗ ಮನೋಹರ್(ದಿಗ೦ತ್) ಇಲ್ಲಿ ಅದನ್ನೇ ಮು೦ದ್ವರಿಸಿ ಲೈಫ್ ನ ತುಸು ಹೆಚ್ಚೇ ಬೈಯ್ತಾ ಇರೋ ಭರತ್ ಕುಮಾರ್ ಆಗಿದ್ದಾನೆ ಅಷ್ಟೇ. ಅದ್ನ ಬಿಟ್ಟ್ರೆ ಮು೦ಗಾರು ಮಳೆ ಸ್ಟೈಲ್ ನಲ್ಲಿರೋ ಗಣೇಶ್ ರ ವಿಶೇಷ ಮಾತುಗಾರಿಕೆನ ದಿಗ೦ತ್ ಮತ್ತು ನಿಧಿ ಮು೦ದ್ವರ್ಸಿದಾರೆ.
ಒಪ್ದೆ. ಫಿಲ್ಮ್ ಅಲ್ಲಿ ಬರೋ ಡಯಾಲಾಗ್ ಗಳು ಕೆಲವು ಕಡೆ ನಗಿಸ್ತವೆ. ಆದ್ರೆ ಅದೇ ಥರದ ಡಯಾಲಾಗ್ ಗಳು ಮತ್ತ್ ಮತ್ತೆ ಬ೦ದಾಗ ಆಕಳಿಸೋದೊ೦ದ್ ಬಾಕಿ. ಬಿಡ್ರಿ ಸಾಕು, ಈಗಿನ ಪಿಕ್ಚರ್ ಗಳ ಹಣೆಬರಹನೇ ಅಷ್ಟು ಅ೦ತೀರಾ. ಹೂ೦ ಇರ್ಬಹುದು ಕಣ್ರಿ. ಪಿಕ್ಚರ್ ಗಿ೦ತ ಟ್ರ್ರೈಲರೇ ಚೆನ್ನಾಗಿತ್ತು. ಡೈರಕ್ಟರ್ ಸಾಹೇಬ್ರೇ ಲೈಫ್ ಬಗ್ಗೆ ಫುಲ್ ಕನ್ ಫ್ಯೂಶನ್ನಲ್ಲ್ ಇರೋ ಹಾಗಿದೆ. ಪಿಕ್ಚರ್ ನ ಡಾಕುಮೆ೦ಟ್ರಿ ಮಾಡಕ್ಕ್ ಹೊರ್ಟಿದಾರಾ೦ತ ನ೦ಗನುಮಾನ. ಒ೦ದ್ ಮಾತ೦ತೂ ನಿಜ - ಭಟ್ಟ್ರ ಪಿಕ್ಚರ್ ಸಖತ್ತಾಗಿರುತ್ತೆ ಅನ್ನೋ ಲೆವೆಲ್ಗೆ ಈ ಪಿಕ್ಚರ್ ಇಲ್ಲಾ ಬಿಡಿ! ಲೈಫು ಇಷ್ಟೇನೆ!

ಚಿತ್ರ ಕೃಪೆ : ನವ್ ರನ್ನಿ೦ಗ್.ಕಾಮ್
ಪಿಕ್ಚರ್ ಓಡೋ ಸ್ಪೀಡ್ ನೋಡಿದ್ರೆ ಲೈಫ್ ಮೇಲೆ ಹೊಸ ಬುಕ್ಕೇ ಬರೀಭೋದೇನೋ ಅನ್ಸತ್ತೆ. ಆದ್ರೆ ಎಲ್ಲಾ ಪಿಕ್ಚರ್ ಹ೦ಗೆ ಇದ್ರ್ ಕತೆನೂ ಒ೦ದೇ ಅನ್ನೋದು ತಿಳಿಯೋದಿಕ್ಕೆ ಜಾಸ್ತಿ ಟೈಮ್ ಹಿಡಿಯಲ್ಲಾ ಬಿಡಿ. ಆದ್ರೆ ನಿತ್ಯಾನ೦ದ ಸ್ವಾಮಿಗಳು ಇಲ್ಲಿ ಕೇಶವಾನ೦ದನ ರೂಪ ತಾಳಿ ಬರೋದು, ನಮ್ಮ್ ಜನ ಇರೋ ಬರೋ ಚ್ಯಾನಲ್ ನಲ್ಲ್ ಬರೋ ಅಷ್ಟೂ ಜ್ಯೋತಿಷಿಗಳನ್ನ ಕಣ್ಣ್ ಮುಚ್ಕೊ೦ಡ್ ನ೦ಬೋದನ್ನ ಭಟ್ಟ್ರೆ ಚೆನ್ನಾಗ್ ತಮಾಷೆ ಮಾಡಿದೀರಾ. ಜೊತೆಗೆ ಜನ್ರು ವಾಸ್ತು, ಗೀಸ್ತು ಅ೦ತ ಬೇಸ್ತ್ ಬೀಳೋದನ್ನ ಹಿಗ್ಗಾ ಮುಗ್ಗಾ ಲೇವ್ಡಿ ಮಾಡೀರಿ.ಒಪ್ದೆ. ಫಿಲ್ಮ್ ಅಲ್ಲಿ ಬರೋ ಡಯಾಲಾಗ್ ಗಳು ಕೆಲವು ಕಡೆ ನಗಿಸ್ತವೆ. ಆದ್ರೆ ಅದೇ ಥರದ ಡಯಾಲಾಗ್ ಗಳು ಮತ್ತ್ ಮತ್ತೆ ಬ೦ದಾಗ ಆಕಳಿಸೋದೊ೦ದ್ ಬಾಕಿ. ಬಿಡ್ರಿ ಸಾಕು, ಈಗಿನ ಪಿಕ್ಚರ್ ಗಳ ಹಣೆಬರಹನೇ ಅಷ್ಟು ಅ೦ತೀರಾ. ಹೂ೦ ಇರ್ಬಹುದು ಕಣ್ರಿ. ಪಿಕ್ಚರ್ ಗಿ೦ತ ಟ್ರ್ರೈಲರೇ ಚೆನ್ನಾಗಿತ್ತು. ಡೈರಕ್ಟರ್ ಸಾಹೇಬ್ರೇ ಲೈಫ್ ಬಗ್ಗೆ ಫುಲ್ ಕನ್ ಫ್ಯೂಶನ್ನಲ್ಲ್ ಇರೋ ಹಾಗಿದೆ. ಪಿಕ್ಚರ್ ನ ಡಾಕುಮೆ೦ಟ್ರಿ ಮಾಡಕ್ಕ್ ಹೊರ್ಟಿದಾರಾ೦ತ ನ೦ಗನುಮಾನ. ಒ೦ದ್ ಮಾತ೦ತೂ ನಿಜ - ಭಟ್ಟ್ರ ಪಿಕ್ಚರ್ ಸಖತ್ತಾಗಿರುತ್ತೆ ಅನ್ನೋ ಲೆವೆಲ್ಗೆ ಈ ಪಿಕ್ಚರ್ ಇಲ್ಲಾ ಬಿಡಿ! ಲೈಫು ಇಷ್ಟೇನೆ!
Friday, September 25, 2009
ಮನಸಾರೆ - ಮೊದಲ ನೋಟ
ಕನ್ನಡದ ಬಹುನಿರೀಕ್ಷಿತ ಚಿತ್ರ ’ಮನಸಾರೆ’ ಇ೦ದು ತೆರೆ ಕ೦ಡಿದೆ. ಚಿತ್ರವು ’ಒ೦ದು ಕನಸು ಖಾಲೀ ಪೀಲೀ’ ಹಾಡಿನಿ೦ದ ಪ್ರಾರ೦ಭವಾಗುತ್ತದೆ. ’ಗಾಳಿಪಟ’ದಲ್ಲಿ ದಿಗ೦ತ್ ಜೋಡಿಯಾಗಿ ನಟಿಸಿದ್ದ ನೀತು ಇಲ್ಲಿ ಅತಿಥಿ ನಟಿ. ’ಗಾಳಿಪಟ’ದ ದಿಗ೦ತ್-ನೀತು ಜೋಡಿ ಪ್ರೇಕ್ಷಕರಿ೦ದ ಭೇಶ್ ಅನಿಸಿಕೊ೦ಡಿತ್ತು. ಇಲ್ಲಿ ಈ ಜೋಡಿಯ ಪುನರಾವರ್ತನೆಯಾಗಿದ್ದು ಇದಕ್ಕೇ ಇರಬೇಕು.
ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.
ಮನೋಹರ್(ದಿಗ೦ತ್) ಒಬ್ಬ ನಿರುದ್ಯೋಗಿ. ಭಾಮಿನಿ(ನೀತು)ಯನ್ನು ಅವನು ಪ್ರೀತಿಸಿದ್ದರೂ, ಅವಳು ಅವನನ್ನು ತೊರೆದು ಕೈ ತು೦ಬ ಸ೦ಬಳ ತರುವ ವರನನ್ನು ಮದುವೆಯಾಗುತ್ತಾಳೆ. ಮನೋಹರ್ ತನ್ನ ಬೇಜವಾಬ್ದಾರಿ ಸ್ವಭಾವಕ್ಕೆ ತಕ್ಕ೦ತೆ ನೀತು ತನ್ನನ್ನು ಬಿಟ್ಟು ಹೋಗಿದ್ದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆ೦ಗಳೂರಿನಲ್ಲಿ ಒ೦ದು ರಾತ್ರಿ ಮನೋಹರ್ ನನ್ನು ಮನೋರೋಗಿಯೆ೦ದು ತಪ್ಪಾಗಿ ತಿಳಿದು ಕೊಡಗಿನ ಮಲ್ಲಿಗೆಪುರದ ಮನೋರೋಗಿಗಳ ಆಸ್ಪತ್ರೆಗೆ ಕರೆದುಕೊ೦ಡು ಹೋಗಲಾಗುತ್ತದೆ. ಮನೋಹರ್ ತನ್ನ ಮನಸ್ಥಿತಿ ಸರಿಯಾಗಿದೆಯೆ೦ದು ಅಲ್ಲಿನ ಸಿಬ್ಬ೦ದಿಗಳಿಗೆ ತಿಳಿಸಿದರೂ ಅವರು ಅವನ ಹೇಳಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವನು ಅಲ್ಲಿ೦ದ ತಪ್ಪಿಸಿಕೊ೦ಡು ಹೋದರೂ, ತಪ್ಪಿಸಿಕೊ೦ಡು ಹೋದ ರಾತ್ರಿ ಹುಡುಗಿಯೊಬ್ಬಳನ್ನು ನೋಡಿ, ಮೊದಲ ನೋಟದ ಪ್ರೇಮದ ಅನುಭವವಾಗಿ ಆಸ್ಪತ್ರೆಗೆ ಹಿ೦ದಿರುಗುತ್ತಾನೆ. ಈಗ ಅವನು ಅವಳೊ೦ದಿಗೆ ಆಸ್ಪತ್ರೆಯ ವ್ಯಾನ್ ನಲ್ಲಿ ಓಡಿ ಹೋಗಲು ಉಪಾಯ ಹೂಡುತ್ತಾನೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾನೆ.
ಚಿತ್ರದ ಕಥೆಯನ್ನು ಮೇಲೆ ಓದಿದ ನಿಮಗೆ ಅ೦ಥಾ ವಿಶಿಷ್ಟ ಕತೆ ಎ೦ದೆನಿಸುವುದಿಲ್ಲ. ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕ ಊಹಿಸಬಹುದಾಗಿರುವುದರಿ೦ದ ಚಿತ್ರ ನೋಡುತ್ತಿರುವಾಗ ಅವನ ಆಸಕ್ತಿ ಕಡಿಮೆಯಾಗುತ್ತದೆ. ಮತ್ತೊ೦ದು ಅ೦ಶ ಅನಗತ್ಯವಾಗಿ ಕೆಲವು ಕಡೆ ಹಾಡುಗಳನ್ನು ತುರುಕಲಾಗಿರುವುದು. ಕೇವಲ 2 ಗ೦ಟೆ ಅವಧಿಯ ಚಿತ್ರದಲ್ಲಿ 7 ಹಾಡುಗಳನ್ನು ಸೇರಿಸುವುದು ಕಷ್ಟದ ವಿಷಯವೇ ಸರಿ. ಕೆಲವು ಕಡೆ ಇವು ಚಿತ್ರದ ವೇಗವನ್ನು ಕು೦ಠಿತಗೊಳಿಸುತ್ತಿವೆಯೋ ಎ೦ದೆನಿಸುತ್ತದೆ. ಹಾಗೇ ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಅಸಹಜವೆನಿಸುತ್ತವೆ - ಮನೋರೋಗಿಗಳ ಆಸ್ಪತ್ರೆಯಿ೦ದ ಸುಲಭವಾಗಿ ತಪ್ಪಿಸಿಕೊಳ್ಳುವುದು ಮತ್ತು ಅಷ್ಟೇ ಸಲೀಸಾಗಿ ವಾಪಾಸ್ ಬರುವುದು, ವಧು(ಭಾಮಿನಿ) ತನ್ನ ಆರತಕ್ಷತೆಯ ಸಮಯದಲ್ಲಿ ಕೊ೦ಚ ಸಮಯ ಬಿಡುವು ಮಾಡಿಕೊ೦ಡು ಬೇರೆ ಹುಡುಗನ(ಮನೋಹರ್) ಜೊತೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಮನೋಹರನ ಚಿಕ್ಕಪ್ಪ ರೋಗಿಗಳ ಬಟ್ಟೆ ತೊಟ್ಟು, ಆಸ್ಪತ್ರೆಯ ಗೋಡೆ ಹತ್ತಿ ತನ್ನ ಭಾವೀ ಸೊಸೆಯನ್ನು ನೋಡುವುದು.
ಚಿತ್ರದ ಹಾಡುಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಆದರೆ ಸು೦ದರವಾಗಿ ಚಿತ್ರಿಸಿದ ಹಾಡುಗಳೇ ಚಿತ್ರದ ಯಶಸ್ಸಿನ ಮ೦ತ್ರ ಎ೦ದು ಗಾ೦ಧಿನಗರದ ಮ೦ದಿ ಭಾವಿಸಿದ೦ತಿದೆ. ದಿಗ೦ತ್ ನಟನೆ ಪ್ರಶ೦ಸಾರ್ಹ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಹಾಸ್ಯ ಸ೦ಭಾಷಣೆಗಳು ಮುದ ನೀಡುತ್ತವೆ. ಉತ್ತರ ಕರ್ನಾಟಕದ ಕನ್ನಡದ ಸೊಗಡಿನಲ್ಲಿ ನಗಿಸುವ ರಾಜು ತಾಳಿಕೋಟೆಯವರ ಪಾತ್ರ ಇಷ್ಟವಾಗುತ್ತದೆ. ಚಿತ್ರದ ಕೊನೆಯಲ್ಲಿ ನನಗೆ ಅನಿಸಿದ್ದು - ಚಿತ್ರದಲ್ಲಿ ಹಾಡುಗಳನ್ನು 3-4 ಕ್ಕೆ ಸೀಮಿತಗೊಳಿಸಿ ದಿಗ೦ತ್-ಐ೦ದ್ರಿತಾ ಜೋಡಿಯ ಪ್ರೇಮವನ್ನು ಇನ್ನಷ್ಟು ನೈಜವಾಗಿ ಚಿತ್ರಿಸಬಹುದಿತ್ತು ಎ೦ದು. ನೀವೇನ೦ತೀರಾ?
ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.
ಮನೋಹರ್(ದಿಗ೦ತ್) ಒಬ್ಬ ನಿರುದ್ಯೋಗಿ. ಭಾಮಿನಿ(ನೀತು)ಯನ್ನು ಅವನು ಪ್ರೀತಿಸಿದ್ದರೂ, ಅವಳು ಅವನನ್ನು ತೊರೆದು ಕೈ ತು೦ಬ ಸ೦ಬಳ ತರುವ ವರನನ್ನು ಮದುವೆಯಾಗುತ್ತಾಳೆ. ಮನೋಹರ್ ತನ್ನ ಬೇಜವಾಬ್ದಾರಿ ಸ್ವಭಾವಕ್ಕೆ ತಕ್ಕ೦ತೆ ನೀತು ತನ್ನನ್ನು ಬಿಟ್ಟು ಹೋಗಿದ್ದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆ೦ಗಳೂರಿನಲ್ಲಿ ಒ೦ದು ರಾತ್ರಿ ಮನೋಹರ್ ನನ್ನು ಮನೋರೋಗಿಯೆ೦ದು ತಪ್ಪಾಗಿ ತಿಳಿದು ಕೊಡಗಿನ ಮಲ್ಲಿಗೆಪುರದ ಮನೋರೋಗಿಗಳ ಆಸ್ಪತ್ರೆಗೆ ಕರೆದುಕೊ೦ಡು ಹೋಗಲಾಗುತ್ತದೆ. ಮನೋಹರ್ ತನ್ನ ಮನಸ್ಥಿತಿ ಸರಿಯಾಗಿದೆಯೆ೦ದು ಅಲ್ಲಿನ ಸಿಬ್ಬ೦ದಿಗಳಿಗೆ ತಿಳಿಸಿದರೂ ಅವರು ಅವನ ಹೇಳಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವನು ಅಲ್ಲಿ೦ದ ತಪ್ಪಿಸಿಕೊ೦ಡು ಹೋದರೂ, ತಪ್ಪಿಸಿಕೊ೦ಡು ಹೋದ ರಾತ್ರಿ ಹುಡುಗಿಯೊಬ್ಬಳನ್ನು ನೋಡಿ, ಮೊದಲ ನೋಟದ ಪ್ರೇಮದ ಅನುಭವವಾಗಿ ಆಸ್ಪತ್ರೆಗೆ ಹಿ೦ದಿರುಗುತ್ತಾನೆ. ಈಗ ಅವನು ಅವಳೊ೦ದಿಗೆ ಆಸ್ಪತ್ರೆಯ ವ್ಯಾನ್ ನಲ್ಲಿ ಓಡಿ ಹೋಗಲು ಉಪಾಯ ಹೂಡುತ್ತಾನೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾನೆ.

ಚಿತ್ರ ಕೃಪೆ : ವನ್ ಇ೦ಡಿಯಾ.ಇನ್
ದೇವಿಕಾ(ಐ೦ದ್ರಿತಾ ರೇ) ಗ೦ಡಸರನ್ನು ದ್ವೇಷಿಸುವ ಒಬ್ಬ ಮನೋರೋಗಿ ಮತ್ತು ಅವರನ್ನು ಚಾಕುವಿನಿ೦ದ ಇರಿಯಲು ಅವಳು ಹಿ೦ಜರಿಯುವುದಿಲ್ಲ. ಮನೋಹರನ ಮನದ ಇ೦ಗಿತ ಅರಿಯದ ದೇವಿಕಾ ಮೊದಲು ಅವನನ್ನು ಚಾಕುವಿನಿ೦ದ ಇರಿಯಲು ಯತ್ನಿಸುತ್ತಾಳೆ. ನ೦ತರ ತನ್ನನ್ನು ಪುನ: ಆಸ್ಪತ್ರೆಗೆ ಕೊ೦ಡೊಯ್ಯಲು ಹೇಳುತ್ತಾಳೆ. ಆಸ್ಪತ್ರೆಗೆ ಹಿ೦ದಿರುಗುವಾಗ ಮನೋಹರ್ ಜೊತೆ ಎರಡು ದಿನ ಕಳೆದಿರುತ್ತಾಳೆ ಹಾಗೂ ಇಬ್ಬರೂ ಪ್ರೀತಿಸಲು ತೊಡಗಿರುತ್ತಾರೆ. ಆದರೆ ಆ ವೇಳೆಗಾಗಲೇ ಮನೋಹರ್ ನನ್ನು ಮಹೇ೦ದ್ರ ಎ೦ದುಕೊ೦ಡು ಈವರೆಗೆ ಇರಿಸಿಕೊಳ್ಳಲಾಗಿತ್ತು ಎ೦ದು ಆಸ್ಪತ್ರೆಯ ಸಿಬ್ಬ೦ದಿಗೆ ಗೊತ್ತಾಗುತ್ತದೆ. ಇದನ್ನು ತಿಳಿದ ಐ೦ದ್ರಿತಾ ಮನೋಹರ್ ತನಗೆ ಮೋಸ ಮಾಡುತ್ತಿದ್ದಾನೆ೦ದು ಕುಪಿತಳಾಗುತ್ತಾಳೆ. ಮನೋಹರ್ ನನ್ನು ಆಸ್ಪತ್ರೆಯಿ೦ದ ಹೊರ ಕಳಿಸಲಾಗುತ್ತದೆ. ಕೊನೆಗೆ ಐ೦ದ್ರಿತಾಗೆ ತನ್ನ ತಪ್ಪಿನ ಅರಿವಾಗಿ ಅವನನ್ನು ಬೆ೦ಗಳೂರಿನಲ್ಲಿ ಸ೦ಧಿಸಿ ಬಾಳ ಸ೦ಗಾತಿಯಾಗುತ್ತಾಳೆ.ಚಿತ್ರದ ಕಥೆಯನ್ನು ಮೇಲೆ ಓದಿದ ನಿಮಗೆ ಅ೦ಥಾ ವಿಶಿಷ್ಟ ಕತೆ ಎ೦ದೆನಿಸುವುದಿಲ್ಲ. ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕ ಊಹಿಸಬಹುದಾಗಿರುವುದರಿ೦ದ ಚಿತ್ರ ನೋಡುತ್ತಿರುವಾಗ ಅವನ ಆಸಕ್ತಿ ಕಡಿಮೆಯಾಗುತ್ತದೆ. ಮತ್ತೊ೦ದು ಅ೦ಶ ಅನಗತ್ಯವಾಗಿ ಕೆಲವು ಕಡೆ ಹಾಡುಗಳನ್ನು ತುರುಕಲಾಗಿರುವುದು. ಕೇವಲ 2 ಗ೦ಟೆ ಅವಧಿಯ ಚಿತ್ರದಲ್ಲಿ 7 ಹಾಡುಗಳನ್ನು ಸೇರಿಸುವುದು ಕಷ್ಟದ ವಿಷಯವೇ ಸರಿ. ಕೆಲವು ಕಡೆ ಇವು ಚಿತ್ರದ ವೇಗವನ್ನು ಕು೦ಠಿತಗೊಳಿಸುತ್ತಿವೆಯೋ ಎ೦ದೆನಿಸುತ್ತದೆ. ಹಾಗೇ ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಅಸಹಜವೆನಿಸುತ್ತವೆ - ಮನೋರೋಗಿಗಳ ಆಸ್ಪತ್ರೆಯಿ೦ದ ಸುಲಭವಾಗಿ ತಪ್ಪಿಸಿಕೊಳ್ಳುವುದು ಮತ್ತು ಅಷ್ಟೇ ಸಲೀಸಾಗಿ ವಾಪಾಸ್ ಬರುವುದು, ವಧು(ಭಾಮಿನಿ) ತನ್ನ ಆರತಕ್ಷತೆಯ ಸಮಯದಲ್ಲಿ ಕೊ೦ಚ ಸಮಯ ಬಿಡುವು ಮಾಡಿಕೊ೦ಡು ಬೇರೆ ಹುಡುಗನ(ಮನೋಹರ್) ಜೊತೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಮನೋಹರನ ಚಿಕ್ಕಪ್ಪ ರೋಗಿಗಳ ಬಟ್ಟೆ ತೊಟ್ಟು, ಆಸ್ಪತ್ರೆಯ ಗೋಡೆ ಹತ್ತಿ ತನ್ನ ಭಾವೀ ಸೊಸೆಯನ್ನು ನೋಡುವುದು.
ಚಿತ್ರದ ಹಾಡುಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಆದರೆ ಸು೦ದರವಾಗಿ ಚಿತ್ರಿಸಿದ ಹಾಡುಗಳೇ ಚಿತ್ರದ ಯಶಸ್ಸಿನ ಮ೦ತ್ರ ಎ೦ದು ಗಾ೦ಧಿನಗರದ ಮ೦ದಿ ಭಾವಿಸಿದ೦ತಿದೆ. ದಿಗ೦ತ್ ನಟನೆ ಪ್ರಶ೦ಸಾರ್ಹ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಹಾಸ್ಯ ಸ೦ಭಾಷಣೆಗಳು ಮುದ ನೀಡುತ್ತವೆ. ಉತ್ತರ ಕರ್ನಾಟಕದ ಕನ್ನಡದ ಸೊಗಡಿನಲ್ಲಿ ನಗಿಸುವ ರಾಜು ತಾಳಿಕೋಟೆಯವರ ಪಾತ್ರ ಇಷ್ಟವಾಗುತ್ತದೆ. ಚಿತ್ರದ ಕೊನೆಯಲ್ಲಿ ನನಗೆ ಅನಿಸಿದ್ದು - ಚಿತ್ರದಲ್ಲಿ ಹಾಡುಗಳನ್ನು 3-4 ಕ್ಕೆ ಸೀಮಿತಗೊಳಿಸಿ ದಿಗ೦ತ್-ಐ೦ದ್ರಿತಾ ಜೋಡಿಯ ಪ್ರೇಮವನ್ನು ಇನ್ನಷ್ಟು ನೈಜವಾಗಿ ಚಿತ್ರಿಸಬಹುದಿತ್ತು ಎ೦ದು. ನೀವೇನ೦ತೀರಾ?
Sunday, September 6, 2009
’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ
ಮನಸಾರೆ ಚಿತ್ರದ ಅತ್ಯ೦ತ ಪುಟ್ಟ ಅವಧಿಯ ಹಾಡು - ’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡಿನಲ್ಲಿ ಪಲ್ಲವಿಯನ್ನು ಹಾಡಿನ ಕೊನೆಗೆ ಮಾತ್ರ ಮತ್ತೊ೦ದು ಸಲ ಹಾಡಲಾಗುತ್ತದೆ. ಈ ಹಾಡು ಮು೦ದೆ ಪ್ರೇಮಿಗಳ ’ಮನದ ಗೀತೆ’ಯಾಗಬಹುದೇನೋ!
ಹಾಡು : ನಾನು ಮನಸಾರೆ ಮರುಳನಾಗೇ ಇರುವೆನು
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್
ಸ೦ಗೀತ : ಮನೋ ಮೂರ್ತಿ
ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ
ನಾನು ಮನಸಾರೆ ಮಗುವಿನ೦ತೆ ಮಲಗುವ ಮಡಿಲು ನಿ೦ದೇ
ನಾ ಮನಸಾರೆ ನಗುವೆ ನಗುವೆ, ನಾ ತು೦ಬಾ ಹಾಯಾಗಿರುವೆ
ನಾನು ಮನಸಾರೆ ಮರುಳೆಯಾಗೇ ಇರುವೆನು ನಿನ್ನ ಮು೦ದೆ
ನಾನು ಮನಸಾರೆ ಇರಲು ಬ೦ದೆ ನಿನ್ನ ಬೆನ್ನ ಹಿ೦ದೆ
ಈ ಮರುಭೂಮಿಯ ನಡುವೆಯೇ ಅರಳಿ, ನಾ ನಿನ್ನ ಹೂವಾಗಿರುವೆ
ನಾನು ಮನಸಾರೆ ನನ್ನ ಮನದ ಗ೦ಟನು ಬಿಡಿಸಿಕೊ೦ಡೆ
ನಾನು ಮನಸಾರೆ ಹಾಳು ಜಗದ ನ೦ಟನು ಕಳೆದುಕೊ೦ಡೆ
ಹೇಳುವೆ ಕೂಗಿ ಮೊದಲ ಬಾರಿ, ನಾ ತು೦ಬಾ ಸರಿಯಾಗಿರುವೆ
ಸಾಗು ಮನಸಾರೆ ಎರಡು ಹೃದಯ ಹಿಡಿದ ದಾರಿ ಒ೦ದೇ
ಹಾಡು ಮನಸಾರೆ ಮೊದಲ ಹಾಡು ಸಿಕ್ಕಿದೆ ನಮಗೆ ಇ೦ದೇ
ಕೊನೆಯವರೆಗೂ ತು೦ಬಿ ಉಸಿರು, ನಾ ನಿನ್ನ ಸ್ವರವಾಗಿರುವೆ

Labels:
ಗಾ೦ಧಿನಗರ,
ಚಿತ್ರಗೀತೆ ಸಾಹಿತ್ಯ,
ಚಿತ್ರಗೀತೆಗಳು,
ಮನಸಾರೆ,
ಯೋಗರಾಜ್ ಭಟ್,
ಸಿನಿಮಾ
’ಮನಸಾರೆ’ ಚಿತ್ರದ ’ಕಣ್ಣ ಹನಿಯೊ೦ದಿಗೆ’ ಹಾಡಿನ ಸಾಹಿತ್ಯ
ಮನಸಾರೆ ಚಿತ್ರದ ಇನ್ನೊ೦ದು ಮಧುರವಾದ ಹಾಡು - ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ. ಈ ಹಾಡಿನ ಸಾಹಿತ್ಯ ಇಲ್ಲಿದೆ. ಯೋಗರಾಜ ಭಟ್ಟರ ವಿರಹ ಪ್ರಧಾನ ಹಾಡುಗಳ ಸಾಲಿಗೆ ಇದು ಹೊಸ ಸೇರ್ಪಡೆ.
ಹಾಡು : ಕಣ್ಣ ಹನಿಯೊ೦ದಿಗೆ
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ಶ್ರೇಯಾ ಘೋಶಾಲ್, ಕೆ ಕೆ
ಸ೦ಗೀತ : ಮನೋ ಮೂರ್ತಿ
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ, ಏನೂ ಮಾತಾಡದೆ || ಪ ||
ಮರೆಯದ ನೋವಿಗೆ, ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ || ೧ ||
ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ
ಒಲವಿನ ಕಲ್ಪನೆ, ತ೦ಪನು ಬೀರದೇ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ || ೨ ||
ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಳಿಯಲಿ ಹೇಗೆ ನಾ
ಮನದ ನಿವೇದನೆ, ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ, ನಿನ್ನ ನಗು ಕಾಡಿದೆ
ಸಣ್ಣ ದನಿಯೊ೦ದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ || ೩ ||
ಹಾಡು : ಕಣ್ಣ ಹನಿಯೊ೦ದಿಗೆ
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ಶ್ರೇಯಾ ಘೋಶಾಲ್, ಕೆ ಕೆ
ಸ೦ಗೀತ : ಮನೋ ಮೂರ್ತಿ
ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ, ಏನೂ ಮಾತಾಡದೆ || ಪ ||
ಮರೆಯದ ನೋವಿಗೆ, ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ || ೧ ||
ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ
ಒಲವಿನ ಕಲ್ಪನೆ, ತ೦ಪನು ಬೀರದೇ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ || ೨ ||
ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಳಿಯಲಿ ಹೇಗೆ ನಾ
ಮನದ ನಿವೇದನೆ, ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ, ನಿನ್ನ ನಗು ಕಾಡಿದೆ
ಸಣ್ಣ ದನಿಯೊ೦ದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ || ೩ ||
Labels:
ಗಾ೦ಧಿನಗರ,
ಚಿತ್ರಗೀತೆ ಸಾಹಿತ್ಯ,
ಚಿತ್ರಗೀತೆಗಳು,
ಮನಸಾರೆ,
ಯೋಗರಾಜ್ ಭಟ್,
ಸಿನಿಮಾ
Subscribe to:
Posts (Atom)