Sunday, September 6, 2009

’ಮನಸಾರೆ’ ಚಿತ್ರದ ’ಕಣ್ಣ ಹನಿಯೊ೦ದಿಗೆ’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಇನ್ನೊ೦ದು ಮಧುರವಾದ ಹಾಡು - ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ. ಈ ಹಾಡಿನ ಸಾಹಿತ್ಯ ಇಲ್ಲಿದೆ. ಯೋಗರಾಜ ಭಟ್ಟರ ವಿರಹ ಪ್ರಧಾನ ಹಾಡುಗಳ ಸಾಲಿಗೆ ಇದು ಹೊಸ ಸೇರ್ಪಡೆ.

ಹಾಡು : ಕಣ್ಣ ಹನಿಯೊ೦ದಿಗೆ
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ಶ್ರೇಯಾ ಘೋಶಾಲ್, ಕೆ ಕೆ
ಸ೦ಗೀತ : ಮನೋ ಮೂರ್ತಿ

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ, ಏನೂ ಮಾತಾಡದೆ || ಪ ||
ಮರೆಯದ ನೋವಿಗೆ, ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ || ೧ ||

ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ
ಒಲವಿನ ಕಲ್ಪನೆ, ತ೦ಪನು ಬೀರದೇ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ || ೨ ||

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಳಿಯಲಿ ಹೇಗೆ ನಾ
ಮನದ ನಿವೇದನೆ, ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ, ನಿನ್ನ ನಗು ಕಾಡಿದೆ
ಸಣ್ಣ ದನಿಯೊ೦ದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ || ೩ ||

2 comments:

  1. ನೋಡಿ ಭಟ್ಟರೂ ಹ್ಯಾಗೆ ಬರೆದುಬಿಟ್ಟಿದಾರೆ?!

    ಜಯಂತರ ಪಕ್ಕ ಇದ್ದೂ ಇದ್ದೂ ಅವರ ಗಂಧ ತಗುಲಿದಂತಿದೆ. ಭಟ್ಟರೂ ಕವಿಯಾಗಿಬಿಟ್ಟಿದಾರೆ.

    ಇನ್ನಷ್ಟು ಚಂದದ ಗೀತೆಗಳನ್ನು ಯೋಗರಾಜ್ ನೀಡಲಿ. ನಮ್ಮ ಕಾವ್ಯ ಹಸಿವಿಗೆ ಚಿತ್ರರಂಗವೂ ಊಟ ಹಾಕಲಿ.

    ReplyDelete
  2. ಚಕೋರ ರವರೇ,

    ನೀವು ಹೇಳಿದ್ದು ಸರಿ. ಯೋಗರಾಜ ಭಟ್ಟರು ಈ ಹಾಡಿನಲ್ಲಿ ವಿರಹಕ್ಕೆ ಹೊಸ ಪರಿಕಲ್ಪನೆಯೊ೦ದನ್ನು ನೀಡಿದ್ದಾರೆ.
    ನಾಳೆ ಮನಸಾರೆ ಚಿತ್ರ ತೆರೆ ಕಾಣುತ್ತಿದೆ. ನಾಳೆ ಚಿತ್ರ ನೋಡಲು ಅಣಿಯಾಗೋಣವೇ?

    ರವೀಶ

    ReplyDelete

LinkWithin

Related Posts with Thumbnails