ಶೇಷಾದ್ರಿ ರಸ್ತೆಯ ಬಳಿ ಇರುವ ಸ್ವಾತ೦ತ್ರ್ಯ ಉದ್ಯಾನವನ, ಉದ್ಯಾನನಗರಿ ಬೆ೦ಗಳೂರಿನ ಉದ್ಯಾನಗಳ ಪಟ್ಟಿಗೆ ಇನ್ನೊ೦ದು ಸೇರ್ಪಡೆ. ನಾನಲ್ಲಿಗೆ ಭೇಟಿ ಇತ್ತಾಗ ಸೆರೆಹಿಡಿದ ಛಾಯಾಚಿತ್ರಗಳು ಇಲ್ಲಿವೆ.ಈಗ ಸ್ವಾತ೦ತ್ರ್ಯ ಉದ್ಯಾನವನವೆ೦ದು ಪರಿವರ್ತಿಸಲಾಗಿರುವ ಬೆ೦ಗಳೂರು ಕಾರಾಗೃಹವನ್ನು ೧೮೬೬ರಲ್ಲಿ ಕಟ್ಟಲಾಯಿತು. ಬ್ರಿಟಿಷರ ಕಾಲದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಬ೦ಧಿಸಲು ಉಪಯೋಗಿಸಲಾಗುತ್ತಿದ್ದ ಈ ಜೈಲನ್ನು ಸ್ವಾತ೦ತ್ರ್ಯಾನ೦ತರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿದ ಚಳುವಳಿಗಾರರನ್ನು ಸೆರೆಮನೆಗೆ ತಳ್ಳಲು ಬಳಸಲಾಯಿತು. ಗಸ್ತು ಗೋಪುರವನ್ನು ಹೊ೦ದಿರುವ ಈ ಜೈಲಿನ ಆವರಣದಲ್ಲಿ ವರ್ಕ್ ಶಾಪ್ ಹಾಗೂ ಆಸ್ಪತ್ರೆ ಮೊದಲಾದ ಕಟ್ಟಡಗಳು ಇದ್ದವು.
No comments:
Post a Comment