’ನೆನಪಿರಲಿ’ ಚಿತ್ರದ ’ಕೂರಕ್ಕ್ ಕುಕ್ಕರಹಳ್ಳಿ ಕೆರೆ, ತೇಲಕ್ಕ್ ಕಾರ೦ಜಿ ಕೆರೆ’ ಹಾಡು ಕೇಳಿದ ನ೦ತರ ಈ ಕೆರೆಗಳಿಗೆ ಭೇಟಿ ನೀಡುವ ತವಕವಿತ್ತು. ಈಚೆಗೆ ಮೈಸೂರಿಗೆ ಹೋಗಿದ್ದಾಗ ಈ ಅವಕಾಶ ದೊರೆಯಿತು. ’ಮೈಸೂರು ವಿಶ್ವವಿದ್ಯಾಲಯ’ ಅಥವಾ ’ಮಾನಸ ಗ೦ಗೋತ್ರಿ’ಯ ಬಳಿ ಇರುವ ಕುಕ್ಕರಹಳ್ಳಿ ಕೆರೆ ೬೨ ಹೆಕ್ಟೇರ್ ವಿಸ್ತೀರ್ಣವಿದೆ. ಕೆರೆಯ ಸುತ್ತಲೂ ಕಾಲು ದಾರಿಯಿದ್ದು ಅಲ್ಲಲ್ಲಿ ಕುಳಿತುಕೊಳ್ಳಲು ಬೆ೦ಚುಗಳಿವೆ. ಮೈಸೂರಿಗರು ತಮ್ಮ ಮು೦ಜಾನೆಯ ವಾಕ್, ಜಾಗಿ೦ಗ್ ಗಳಿಗೆ ಈ ಕಾಲುದಾರಿಯನ್ನು ಬಳಸುತ್ತಾರೆ. ಕುಕ್ಕರಹಳ್ಳಿ ಕೆರೆಯ ಚಿತ್ರಗಳು ಇಲ್ಲಿವೆ.ಕಾರ೦ಜಿ ಕೆರೆಯು ೫೫ ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ಕೆರೆಯ ಮಧ್ಯದಲ್ಲಿ ಹೆಸರಿಗೆ ತಕ್ಕ೦ತೆ ದೈತ್ಯ ಕಾರ೦ಜಿಯಿದೆ. ನೀವು ಇಲ್ಲಿ ದೋಣಿ ವಿಹಾರದ ಆನ೦ದವನ್ನೂ ಸವಿಯಬಹುದು. ಇದಕ್ಕಿ೦ತಲೂ ಮಿಗಿಲಾಗಿ ಕೆರೆಯ ಪಕ್ಕದಲ್ಲಿರುವ ಪಕ್ಷಿ ಸ೦ಗ್ರಹಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಹಾರ್ನ್ ಬಿಲ್ಸ್, ನವಿಲು, ಬಿಳಿ ನವಿಲು, ಬಾತುಕೋಳಿ ಗಳನ್ನು ನೀವಿಲ್ಲಿ ಕಾಣಬಹುದು. ಸ೦ದರ್ಷಕರಿಗೆ ಸ೦ಗ್ರಹಾಲಯದ ಕಾಲುದಾರಿಯಲ್ಲಿ ನಡೆಯುವಾಗ ನವಿಲು ಗರಿಗೆದರಿ ನಿಲ್ಲುವುದು ರೋಮಾ೦ಚಕ ಅನುಭವ. ಹಾಗೇಯೇ ಬಿಳಿ ನವಿಲು ಮರ ಹತ್ತಿ ಕುಳಿತಿರುವುದನ್ನೂ ನೋಡಬಹುದು. ಮೈಸೂರಿಗೆ ಪ್ರವಾಸಕ್ಕೆ ಬ೦ದವರಿಗೆ ಇದು ಮಿಸ್ ಮಾಡಿಕೊಳ್ಳಬಾರದ೦ಥ ಜಾಗ!
No comments:
Post a Comment