Showing posts with label ಡೇಟಾ ದೇವರು. Show all posts
Showing posts with label ಡೇಟಾ ದೇವರು. Show all posts

Saturday, January 23, 2021

ಕನ್ನಡ ವಾರಪತ್ರಿಕೆ "ಸುಧಾ" ದಲ್ಲಿ ನನ್ನ ಪ್ರತಿಕ್ರಿಯೆ ಪ್ರಕಟ!

ಜನವರಿ ೧೪ ರ "ಸುಧಾ" ವಾರಪತ್ರಿಕೆಯಲ್ಲಿ ಗುರುರಾಜ್ ದಾವಣಗೆರೆ ಅವರು ಬರೆದಿದ್ದ "ಡೇಟಾ ದೇವರು, ಅಲ್ಗೊರಿಧರ್ಮ" ಲೇಖನ ಪ್ರಕಟವಾಗಿತ್ತು. ಸರ್ವಾಂತರ್ಯಾಮಿ ಡೇಟಾ ಕುರಿತಾದ ಲೇಖನ ಅದ್ಭುತವಾಗಿ ಮೂಡಿ ಬಂದಿತ್ತು. ಅದಕ್ಕೆ ನಾನು ಕಳಿಸಿದ ಪ್ರತಿಕ್ರಿಯೆ ಜನವರಿ ೨೮ ರ ಸಂಚಿಕೆಯಲ್ಲಿ ಪ್ರಕಟವಾಗಿದೆ! 
Raveesh Kumar's feedback on sudha article 'Data Devaru, Algoritharma'
ಪ್ರಕಟವಾದ ನನ್ನ ಪ್ರತಿಕ್ರಿಯೆಯ ಪೂರ್ಣ ಪಾಠ ಇಲ್ಲಿದೆ  :
ಗುರುರಾಜ್ ದಾವಣಗೆರೆ ಅವರು ಜ. ೧೪ ರ ಸಂಚಿಕೆಯಲ್ಲಿ ಬರೆದಿರುವ 'ಡೇಟಾ ದೇವರು, ಅಲ್ಗೊರಿಧರ್ಮ' ಲೇಖನ ಆಳವಾದ ಅಧ್ಯಯನದಿಂದ ಕೂಡಿತ್ತು. ಹಾಗೆಯೇ ಪ್ರಚಲಿತ ತಂತ್ರಜ್ಞಾನಗಳ ಅಪರಿಮಿತ ಸಾಧ್ಯತೆಗಳ ಜೊತೆಗೆ ಒಳಿತು, ಕೆಡುಕು - ಎರಡೂ ಮಗ್ಗಲುಗಳ ಪರಿಚಯವನ್ನು, ಎಗ್ಗಿಲ್ಲದೆ ಬಳಸುವ ಎಲ್ಲರಿಗೂ ಮಾಡಿಸುವಂತಿತ್ತು. ಕನ್ನಡ ಪತ್ರಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಲೇಖನ ಪ್ರಕಟವಾಗಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಯಾದ ನನಗಂತೂ ಹೆಮ್ಮೆಯ ವಿಷಯ.
    - ರವೀಶ್ ಕುಮಾರ್, ಬೆಂಗಳೂರು 
ಜನವರಿ ೧೪ ರ "ಸುಧಾ" ವಾರಪತ್ರಿಕೆಯ  ಮುಖಪುಟ ಇಲ್ಲಿದೆ 
Sudha Kannada Weekly - Jan 14 Edition


LinkWithin

Related Posts with Thumbnails