ಹಿನ್ನೆಲೆ : ಈ ಕವನವು ಸರ್ ಲಾರೆನ್ಸ್ ಅಲ್ಮಾ ತಾಡೆಮಾ ರಿಂದ ರಚಿತವಾದ "" ಚಿತ್ರದಿಂದ ಪ್ರೇರಿತವಾಗಿದೆ. ಆ ಚಿತ್ರದಲ್ಲಿ ವ್ಯಕ್ತಿಯೊಬ್ಬ ಒಂದು ಸಂತೋಷಕರ ದಿನದ ಬಳಿಕ, ಸೂರ್ಯಾಸ್ತದ ಸಮಯದಲ್ಲಿ ಕಡಲದಂಡೆಯಲ್ಲಿ ಅಲೆಗಳನ್ನು ವೀಕ್ಷಿಸುತ್ತಾ ದಿಗಂತದ ಕಡೆ ನೋಡುತ್ತಿರುತ್ತಾನೆ. ಅವನ ಆ ಮನಸ್ಥಿತಿ ಬಹುಶ: ಹಿಂದೆಂದೂ ಕಂಡು ಕೇಳರಿಯದ ಕಷ್ಟದ ಪರಿಸ್ಥಿತಿಯಲ್ಲಿರುವ ಈಗಿನ ನಮ್ಮೆಲ್ಲರ ಮನಸ್ಥಿತಿಯೂ ಆಗಿದೆ ಎಂದೆನಿಸುತ್ತದೆ.
ಜೀವನ ಪ್ರೀತಿ
- ರವೀಶ್ ಕುಮಾರ್
ನೀಲ ಸಾಗರದಿ ಅಲೆಯೊ೦ದು ಚಿಮ್ಮಿ
ಆ ಕ್ಷಣದಿ ಉತ್ಸಾಹ ಹೊಮ್ಮಿ
ಮತ್ತೆ ಶಾ೦ತವಾಗಿದೆ ಕಡಲು
ಮನ ಬೇಸರದಿ೦ದೊಡೆದಿದೆ ಕವಲು
ಮತ್ತೆ ಮತ್ತೆ ಬರುವುದೇ ಈ ದಿನ
ಸ೦ತಸದಿ೦ದ ಕಳೆದ ಆ ಕ್ಷಣ
ಅಮೃತ ಶಿಲೆಯ ಸ್ವಚ್ಛ ಬಿಳುಪಿನ೦ತೆ
ಅಲೆಯ ನೀಲಿ ಮಾಸಿ ರವಿಕಿರಣ ಮಿನುಗಿದ೦ತೆ
ಬದಲಾವಣೆಯೇ ಜಗದ ನಿಯಮವಾದರೆ
ಆಗಾಗ ಕ೦ಡರೂ ತೊ೦ದರೆ
ಮರಳುವುದು ಜೀವನ ಪ್ರೀತಿ
ಓಡಿ ಹೋಗುವುದು ಕಷ್ಟಗಳ ಭೀತಿ
ಜೀವನ ಪ್ರೀತಿ
- ರವೀಶ್ ಕುಮಾರ್
ನೀಲ ಸಾಗರದಿ ಅಲೆಯೊ೦ದು ಚಿಮ್ಮಿ
ಆ ಕ್ಷಣದಿ ಉತ್ಸಾಹ ಹೊಮ್ಮಿ
ಮತ್ತೆ ಶಾ೦ತವಾಗಿದೆ ಕಡಲು
ಮನ ಬೇಸರದಿ೦ದೊಡೆದಿದೆ ಕವಲು
ಮತ್ತೆ ಮತ್ತೆ ಬರುವುದೇ ಈ ದಿನ
ಸ೦ತಸದಿ೦ದ ಕಳೆದ ಆ ಕ್ಷಣ
ಅಮೃತ ಶಿಲೆಯ ಸ್ವಚ್ಛ ಬಿಳುಪಿನ೦ತೆ
ಅಲೆಯ ನೀಲಿ ಮಾಸಿ ರವಿಕಿರಣ ಮಿನುಗಿದ೦ತೆ
ಬದಲಾವಣೆಯೇ ಜಗದ ನಿಯಮವಾದರೆ
ಆಗಾಗ ಕ೦ಡರೂ ತೊ೦ದರೆ
ಮರಳುವುದು ಜೀವನ ಪ್ರೀತಿ
ಓಡಿ ಹೋಗುವುದು ಕಷ್ಟಗಳ ಭೀತಿ
No comments:
Post a Comment