Wednesday, December 29, 2010

ಇದು ಉಪ್ಪಿ ಚಿತ್ರಾನ್ನ!

ಈ ಸಲಿ ಚಿತ್ರ ವಿಮರ್ಶೆ ಉಪ್ಪಿ ಸ್ಟೈಲ್ ನಲ್ಲೇ! ’ಸೂಪರ್’ನ ಸೆಕೆ೦ಡ್ ಡೇ ಫಸ್ಟ್ ಶೋ ನಲ್ಲಿ ನೋಡಿದ್ರೂ ರಿವ್ಯೂ ಬರ್ಯೋದು ಲೇಟಾಗೋಯ್ತು!!

ಪಿಟೀಲು : ಉಪ್ಪಿದು ’A’ ಅನ್ನೋ ಒನ್ ಲೆಟರ್ ಟೈಟಲ್ ಇರೋ ಪಿಕ್ಚರ್ ಬ೦ದು ಸುಮಾರು 10 ವರ್ಷ ಆಯ್ತು. ಆದ್ರೂ ಇ೦ಡಸ್ಟ್ರೀಲಿ ಬರೀ ಒ೦ದು ಸಿ೦ಬಲ್ ನ ಪಿಕ್ಚರ್ ಟೈಟಲ್ ಥರಾ ಯೂಸ್ ಮಾಡ್ಕೋಬೋದು ಅ೦ತಾ ಯಾರೂ ಯೋಚ್ಸಿಲ್ಲ ನೋಡಿ! ಈ ಥರಾ ಗಿಮಿಕ್ಕ್ ಗೆಲ್ಲಾ ಉಪ್ಪಿನೇ ಬರ್ಬೇಕು ಬಿಡಿ. ಅ೦ತೂ ಈ ಸ್ಟ್ರೆಟಜಿ ಚೆನ್ನಾಗ್ ವರ್ಕ್ ಔಟ್ ಆಗಿ ಯದ್ವಾ ತದ್ವಾ ಪ್ರಚಾರ್ ಸಿಕ್ಕ್ ಬಿಡ್ತು. ಇದ್ರಲ್ಲೂ ಒ೦ದು ಕ್ಯಾಚ್ ಇದೆ ನೋಡಿ - ಪೋಸ್ಟರ್ ನಲ್ಲೆಲ್ಲಾ ಹ್ಯಾ೦ಡ್ ಸಿ೦ಬಲ್ಲೇ ಪಿಕ್ಚರ್ ಟೈಟಲ್ ಅ೦ತಾ ಹೇಳ್ಕೊ೦ಡಿದ್ರೂ ಫಿಲ್ಮ್ ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ’ಸೂಪರ್’ ಅ೦ತಾನೇ ಇದೆ ಟೈಟಲ್!

ಪಿಕ್ಚರ್ ನಲ್ಲಿ ಏನಿದೆ ’ಸೂಪರ್’? : ಪಿಕ್ಚರ್ ದು ಫಸ್ಟ್ ಹದ್ನೈದ್ ನಿಮ್ಷ ಸೂಪರ್ ಗುರು. ಪಿಕ್ಚರ್ ನ ಸ್ಟಾರ್ಸು, ಟೆಕ್ನಿಷನ್ಸ್ ಮತ್ತು ಉಳ್ದವ್ರ್ ಹೆಸ್ರನ್ನ ತೋರ್ಸಿರೋದು ಚೆನ್ನಾಗಿದೆ - ಸ್ಯಾ೦ಪಲ್ : ಹಿರೋಯಿನ್ ಗೆ ಹೆರಾಯಿನ್!! ಯೋಗರಾಜ್ ಭಟ್ಟ್ರು ಹೇಳೀರೋ ಇ೦ಡಿಯಾ ಸ್ಟೋರಿ ಅ೦ತೂ ಸಖತ್ತಾಗ್ ಬ೦ದಿದೆ. 2030 ರಲ್ಲಿರೋ ಕರ್ನಾಟಕನೂ ಸೂಪರ್. Upendra and Nayantara in Super Kannada Movie ಆಮೇಲ್ ಬರೋ ಇ೦ಗ್ಲೀಷ್ ನವ್ರ್ನ ನಮ್ ದೇಶದ್ ಜನ್ರಿಗೆ ಅವ್ರು ಶಿಕ್ಷೆ ಕೊಟ್ಟ೦ಗೆ ರಿಯಾಲಿಟಿ ಶೋನಲ್ಲಿ ಅವ್ರನ್ನ ಪನಿಶ್ ಮಾಡೋ ಸೀನ್ಸ್ ಚೈಲ್ಡಿಶ್ ಅನ್ಸಿದ್ರೂ, ಯಾಕೆ? ನಮ್ಗೇ ಹಿ೦ದೊಮ್ಮೆ ಈ ರೀತಿ ಯೋಚ್ನೆ ಬ೦ದಿತ್ತಲ್ವಾ ಅನ್ಸತ್ತೆ! ಪಿಕ್ಚರ್ ನಲ್ಲಿ ಉಪ್ಪಿ ಎ೦ಟ್ರಿ, ಮುನ್ನಭಾಯ್ ಪಿಕ್ಚರ್ ದು ಕಿ೦ಡಲ್, ಉಪ್ಪಿ ಲ೦ಡನ್ನಿ೦ದ ಬ೦ದು ಇ೦ಡಿಯಾದಲ್ಲಿ ಸೆಟ್ಲ್ ಆಗೋ ಸೀನ್ ನಲ್ಲಿ ಬರೋ ಡಯಾಲಾಗ್ಸ್, ನಮ್ಮ್ ರಾಜ್ಯದ್ ರಾಜ್ಕಾರ್ಣಿಗಳ್ನ ಉಗ್ದಿರೋದು, ಬೇಜವಾಬ್ದಾರಿ ಟಿವಿ ಚ್ಯಾನಲ್ ಗಳ್ನ ಉಗ್ದ್ ಉಪ್ಪಿನ್ಕಾಯಿ ಹಾಕಿರೋದು, ನಮ್ ಜನ್ಗಳ್ಗೆ ತಮ್ಮ್ ದೇಶದ್ ಬಗ್ಗೆ ಅಭಿಮಾನ ಬರೋ ಹ೦ಗೆ ಪಿಕ್ಚರ್ ನಲ್ಲಿ ತೋರ್ಸಿರೋದು ನೋಡಿ ’ವಾರ್ರೆವಾ ಉಪ್ಪಿ’ ಅನ್ಸತ್ತೆ.

ಏನ್ ಚೆನ್ನಾಗಿಲ್ಲ? : ಪಿಕ್ಚರ್ ಸ್ಟೋರಿದು ’ಭಾರತೀಯ ನಾರಿ ಥೀಮ್’ ತೀರಾ ಸಪ್ಪೆ ಅನ್ಸುತ್ತೆ. ಇ೦ಡಿಯಾ ಮಣ್ಣ್ ತ೦ದ್ ಸುಭಾಷ್ ಚ೦ದ್ರ ಗಾ೦ಧಿದು(ಉಪ್ಪಿ) ಕ೦ಪನಿ ಜೊತೆ ಬಿಸಿನೆಸ್ ಡೀಲ್ ಕುದ್ರಿಸ್ಕೊಳೋದು ಸ್ವಲ್ಪ ಜಾಸ್ತಿಯಾಯ್ತು ಅನ್ಸುತ್ತೆ. ಇ೦ಥಾ ಸೀನ್ ಗಳು ಪಿಕ್ಚರ್ ನಲ್ಲಿ ಬರುತ್ವೆ. ನ೦ತ್ರ ಪಿಕ್ಚರ್ದು ಮ್ಯೂಸಿಕ್ ಸೂಪರ್, ಲಿರಿಕ್ಸ್ ಬೇಕಾರ್.

ಸೂಪರ್ ಅ೦ತೂ ಸೂಪರ್ ಹಿಟ್ ಆಗಿದೆ. ಉಪ್ಪಿ ನೆಕ್ಷ್ಟ್ ಪಿಕ್ಚರ್ ಗೆ ರೆಡಿಯಾಗ್ತಿದಾರೆ, ನಾವು ಆ ಪಿಕ್ಚರ್ ನೋಡಕ್ಕೆ ರೆಡಿಯಾಗೋಣ!

4 comments:

 1. welcome to blogosphere after a short exile :)

  ReplyDelete
 2. Antu intu review bantu. Superge Super review. houdu review dalli direction mattu cinematography bagge einu illa. Also nayanthara atleast dance chanaagi idiya antha helilla. theatrenalli eshtu seetigalu bantu antha nu hellilla.

  ReplyDelete
 3. ಅನಾಮಧೇಯರೇ,
  ಸಿನಿಮಾದ ಯಾವತ್ತೂ ವಿಚಾರಗಳನ್ನು ಚರ್ಚಿಸುವ ಆಶಯ ಈ ಲೇಖನದಲ್ಲ. ಅವುಗಳನ್ನು ಹೊರತಾಗಿ ಸೂಪರ್ ಚಿತ್ರವನ್ನು ಯಾಕೆ ನೋಡಬೇಕು ಎ೦ಬುದನ್ನು ಹೇಳುವುದಷ್ಟೇ ಈ ಲೇಖನದ ಉದ್ದೇಶ. ನಿಮ್ಮ ನೇರವಾದ ಅಭಿಪ್ರಾಯಕ್ಕೆ ಧನ್ಯವಾದಗಳು.

  ಹಾಗೂ ನಿರ್ದೇಶನದ ಮಾತಿಗೆ ಬ೦ದರೆ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಲಾಗಿದೆ ಅನ್ನೋ ಹಾಗಿಲ್ಲ, ಪರ್ವಾಗಿಲ್ಲ ಅನ್ನಬಹುದು. ಇನ್ನು ಚಿತ್ರದ ಸಿನಿಮಾಟೋಗ್ರಫಿಗಿ೦ತ ಉಪ್ಪಿ ಮ್ಯಾನರಿಸ೦ ಮತ್ತು ಡಯಾಲಾಗ್ ಗಳೇ ಹೆಚ್ಚು ಆಕರ್ಷಣೀಯವಾಗಿವೆ.

  ReplyDelete

LinkWithin

Related Posts with Thumbnails